ಹಬ್ಬದ ಸೀಸನ್‌ನಲ್ಲಿ ಚಿನ್ನ ಖರೀದಿಸಲು ಸಿದ್ಧರಾಗಿರುವವರಿಗೆ ಸಮಾಧಾನ ಸಿಕ್ಕಿದೆ. ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಇಳಿಕೆಯಾಗುವ ನಿರಿಕ್ಷೆ ಹೆಚ್ಚಿದೆ. ಇತ್ತೀಚೆಗೆ ಬಂಗಾರದ ಬೆಲೆಗಳು ಸತತವಾಗಿ ಏರಿಕೆ ಕಂಡು ಆತಂಕ ಮೂಡಿಸಿದ್ದವು. ಆದರೆ, ಸ್ಥಿರವಾಗಿದ್ದು, ಸ್ವಲ್ಪ ರಿಲೀಫ್ ನೀಡಿವೆ. ಭಾರತದಲ್ಲಿ ದಸರಾ ಮತ್ತು ದೀಪಾವಳಿ ಅತಿ ದೊಡ್ಡ ಹಬ್ಬಗಳಾಗಿವೆ. ಹಬ್ಬದ ಸೀಸನ್‌ನಲ್ಲಿ ಸಹಜವಾಗಿಯೇ ಚಿನ್ನಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಇಂತಹ ಸಮಯದಲ್ಲಿ ಚಿನ್ನದ ಬೆಲೆಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗುವುದು ಗ್ರಾಹಕರನ್ನು ಹಿಂದಕ್ಕೆ ಸರಿಯುವಂತೆ ಮಾಡುತ್ತದೆ. ಆದರೆ, ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದ ಚಿನ್ನದ ಬೆಲೆಗಳು ಸ್ಥಿರವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಇಳಿಕೆಯಾಗಿದ್ದು, ದೇಶೀಯವಾಗಿಯೂ ಇಳಿಕೆಯಾಗುವ ನಿರೀಕ್ಷೆಗಳಿವೆ.
ಬೆಂಗಳೂರಲ್ಲಿ ಚಿನ್ನದ ಬೆಲೆ
ಬೆಂಗಳೂರಲ್ಲಿ ಚಿನ್ನದ ಬೆಲೆಗಳು ಸ್ಥಿರವಾಗಿವೆ. ಕಳೆದ ಎರಡು ದಿನಗಳಿಂದ ಭಾರೀ ಏರಿಕೆ ಕಂಡಿದ್ದ ಚಿನ್ನದ ಬೆಲೆಗಳು ಭಾನುವಾರದಂದು ಸ್ಥಿರವಾಗಿದೆ. ಪ್ರಸ್ತುತ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ, ₹1,08,490 ರಲ್ಲಿ ಮುಂದುವರಿದಿದೆ. ಇನ್ನು, 22 ಕ್ಯಾರೆಟ್ ಆಭರಣ ಚಿನ್ನದ ದರ 10 ಗ್ರಾಂಗೆ ₹99,450 ರಲ್ಲಿ ಸ್ಥಿರವಾಗಿದೆ.ಬೆಳ್ಳಿ ದರ ಸ್ಥಿರ
ಚಿನ್ನದ ಜೊತೆಗೆ ಸತತವಾಗಿ ಏರಿಕೆಯಾಗುತ್ತಿದ್ದ ಬೆಳ್ಳಿ ಬೆಲೆ ಕೂಡ ಸ್ಥಿರವಾಗಿದೆ. ಕಳೆದ ಶನಿವಾರದಂದು ಬೆಂಗಳೂರಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆ ₹2000 ಹೆಚ್ಚಾಗಿದ್ದು ₹1,28,000ಕ್ಕೆ ತಲುಪಿತ್ತು. ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್‌ನಲ್ಲಿ ಬೆಳ್ಳಿ ಬೆಲೆ ಸ್ವಲ್ಪ ದುಬಾರಿಯಾಗಿದ್ದು, ಪ್ರತಿ ಕೆಜಿಗೆ ₹1,38,000 ರಲ್ಲಿ ವಹಿವಾಟು ನಡೆಸುತ್ತಿದೆ. ಮತ್ತೊಂದೆಡೆ, ದೆಹಲಿ, ಮುಂಬೈನಂತಹ ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ದರ ₹1,28,000ಕ್ಕೆ ಲಭ್ಯವಿದೆ. ಇದಕ್ಕೆ ತೆರಿಗೆಗಳು ಕಾರಣ ಎಂದು ಹೇಳಬಹುದು.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು ಕಡಿಮೆಯಾಗಿವೆ. ಸ್ಪಾಟ್ ಗೋಲ್ಡ್ ದರ ಒಂದು ಔನ್ಸ್‌ಗೆ ಬರೋಬ್ಬರಿ 10 ಡಾಲರ್‌ನಷ್ಟು ಇಳಿಕೆಯಾಗಿದೆ. ಇದರಿಂದ ನಿನ್ನೆ ಭಾನುವಾರದಂದು ಒಂದು ಔನ್ಸ್ ಚಿನ್ನದ ಬೆಲೆ 3585 ಡಾಲರ್‌ಗೆ ಇಳಿದಿದೆ. ಇನ್ನು, ಸ್ಪಾಟ್ ಸಿಲ್ವರ್ ದರ ಒಂದು ಔನ್ಸ್‌ಗೆ 0.48 ಪ್ರತಿಶತದಷ್ಟು ಕಡಿಮೆಯಾಗಿದ್ದು, 40.78 ಡಾಲರ್‌ಗೆ ಇಳಿದಿದೆ.ಈ ಲೇಖನದಲ್ಲಿ ತಿಳಿಸಲಾದ ಚಿನ್ನ ಮತ್ತು ಬೆಳ್ಳಿ ದರಗಳು ಸೆಪ್ಟೆಂಬರ್ 8, ಸೋಮವಾರದಂದು ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಇದ್ದವು. ಮಧ್ಯಾಹ್ನದ ವೇಳೆಗೆ ಚಿನ್ನದ ದರಗಳು ಬದಲಾಗಬಹುದು. ಅಲ್ಲದೆ, ಇಲ್ಲಿ ತಿಳಿಸಿರುವ ಬೆಲೆಗಳು ಮಾರುಕಟ್ಟೆ ಬೆಲೆಗಳಾಗಿವೆ. ಇವು ತೆರಿಗೆ ಮೇಕಿಂಗ್ ಶುಲ್ಕ ಮೊದಲಾದ ಇತರೆ ವೆಚ್ಚಗಳನ್ನು ಒಳಗೊಂಡಿಲ್ಲ. ರಾಜ್ಯದಿಂದ ರಾಜ್ಯಕ್ಕೆ ತೆರಿಗೆ ದರಗಳು ಬದಲಾಗುತ್ತವೆ. ಹೀಗಾಗಿ ಆಯಾ ರಾಜ್ಯಗಳಲ್ಲಿ ಚಿನ್ನ- ಬೆಳ್ಳಿ ಬೆಲೆಗಳಲ್ಲಿ ವ್ಯತ್ಯಾಸ ಇರುತ್ತದೆ. ನಿಖರ ಬೆಲೆಗಳನ್ನು ತಿಳಿಯಲು ಹತ್ತಿರದ ಆಭರಣ ಮಳಿಗೆಗೆ ಭೇಟಿ ನೀಡಿ.